ಚೆನ್ನೈ: ಕಾಲಿವುಡ್ ಖ್ಯಾತಿಯ ಲೋಸ್ಲಿಯಾ ಮರಿಯನೇಸನ್ ತಮ್ಮ ಖಾಸಗಿ ವಿಡಿಯೊ ಬಗ್ಗೆ ಕೊನೆಗೂ ಮೌನ ಮುರಿದಿದ್ದು ಈ ಜಗತ್ತು ಬರೀ ಸುಳ್ಳುಗಳಿಂದಕೂಡಿದೆ ಎಂದು ಹೇಳುವ ಮೂಲಕತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯೆ ನೀಡಿರುವ ಲೋಸ್ಲಿಯಾ ಆಖಾಸಗಿ ವಿಡಿಯೊ ಸುಳ್ಳು ಎಂದುಹೇಳಲುಪ್ರಯತ್ನಿಸಿದ್ದಾರೆ.
ಯಾರು ಈ ಲೋಸ್ಲಿಯಾ?
ಶ್ರೀಲಂಕಾ ಮೂಲದ ಲೋಸ್ಲಿಯಾ ಮರಿಯನೇಸನ್ ತಮಿಳಿನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಬಿಗ್ಬಾಸ್ನಲ್ಲಿ ಭಾಗವಹಿಸಿದ್ದ ಅವರು ತಮಿಳುನಾಡಿನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಮುದ್ದು ಮಾತುಗಳು ಮತ್ತು ಮುಗ್ದ ಅಭಿನಯದ ಮೂಲಕ ತಮಿಳು ಅಭಿಮಾನಿಗಳ ಮನೆ ಗೆದ್ದಿರುವ ಲೋಸ್ಲಿಯಾ ಕೈಯಲ್ಲಿ ಈಗ ಹಲವಾರು ಸಿನಿಮಾಗಳು ಇವೆ.
ಮಾಜಿ ಕ್ರಿಕೆಟಿಗ ಹರಭಜನ್ ಸಿಂಗ್ ಹಾಗೂ ಅರ್ಜುನ್ ಸರ್ಜಾ ಅಭಿನಯದ ಫ್ರೆಂಡ್ಸ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಲೋಸ್ಲುಆಗೆ ಟಾಲಿವುಡ್ನಲ್ಲೂ ಆಫರ್ಗಳು ಬಮದಿರುವುದು ಸುಳ್ಳಲ್ಲ.
ಏನಿದು ಖಾಸಗಿ ವಿಡಿಯೊ?
ಬಿಗ್ಬಾಸ್ ಮನೆಯಿಂದ ಹೊರಬಂದ ಕೆಲವೇ ದಿನಗಳಲ್ಲಿ ಲೋಸ್ಲಿಯಾ ಅವರ ಬೆಡ್ರೂಂ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ವಿಡಿಯೊದಲ್ಲಿ ಇರುವ ಯುವಕ ಯಾರು ಎಂಬ ಚರ್ಚೆಗಳು ನಡೆದಿದ್ದವು. ಆ ಖಾಸಿ ವಿಡಿಯೊದಲ್ಲಿ ಇರುವುದು ಲೋಸ್ಲಿಯಾ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗಿತ್ತು. ವಿಡಿಯೊ ವೈರಲ್ ಆದ ಬಳಿಕ ಲೋಸ್ಲಿಯಾ ನಾಪತ್ತೆಯಾಗಿದ್ದರು. ಇದೀಗ ಪ್ರತ್ಯಕ್ಷವಾಗಿರುವ ಅವರು ಆ ವಿಡಿಯೊ ಸುಳ್ಳು ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ.
ಈ ಜಗತ್ತು ಸುಳ್ಳುಗಳ ಸಂತೆ, ಇಲ್ಲಿ ಭಯ ಮತ್ತು ನೆಗೆಟಿವ್ ಕೂಡ ಇದೆ. ಇವುಗಳ ಮಧ್ಯೆ ನಮ್ಮ ಬದುಕಿನ ಬೆಳಕು ಹಾದು ಹೋಗಬೇಕಿದೆ. ಇವುಗಳ ಮಧ್ಯೆ ಜನತೆ ಸಂತೋಷವಾಗಿ ಬದುಕಲು ಬದಲಾಗಬೇಕು ಎಂಬುದು ನನ್ನ ಭಾವನೆ ಎಂದು ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.